ರಾಶಿ ಚಕ್ರಗಳು ಮತ್ತು ಸೂರ್ಯ
ಜನ್ಮ ಕುಂಡಲಿ ಪ್ರಕಾರ ಕನ್ನಡದಲ್ಲಿ ಜ್ಯೋತಿಷ್ಯಶಾಸ್ತ್ರದಲ್ಲಿ ಸೂರ್ಯ ಅತ್ಯುನ್ನತ ಶಕ್ತಿ ಮೂಲ ಮತ್ತು ಸಂಪೂರ್ಣ ಸೌರ ವ್ಯೂಹದ ಚಾಲಕ ಶಕ್ತಿಯಾಗಿದೆ. ಸೂರ್ಯ ಅಧಿಕಾರ, ಸ್ವಾತಂತ್ರ್ಯ, ಸಾಮರ್ಥ್ಯ, ಶಕ್ತಿ, ಜನಪ್ರಿಯತೆ, ಮತ್ತು ಇತರ ಸಕಾರಾತ್ಮಕ ಅಂಶಗಳ ಚಿಹ್ನೆಯಾಗಿದೆ. ಸಾಮಾನ್ಯವಾಗಿ, ವ್ಯಕ್ತಿಯೊಬ್ಬರಿಗೆ ಸೂರ್ಯ ವ್ಯಾಖ್ಯಾನಿಸುವ ಧಾತುವಾಗಿರುತ್ತದೆ. ಏಕೆಂದರೆ ಇದು ಅವರ ವ್ಯಕ್ತಿತ್ವವನ್ನು ಪ್ರತಿಫಲಿಸುತ್ತದೆ ಮತ್ತು ಆಂತರಿಕವಾಗಿ ಅವರು ಯಾರು ಎನ್ನುವುದನ್ನು ತೋರಿಸುತ್ತದೆ.
ನಿಮಗೆ ಕನ್ನಡ ಜ್ಯೋತಿಷ್ಯದ (ಕನ್ನಡದಲ್ಲಿ ಜ್ಯೋತಿಷ್ಯ) ಬಗ್ಗೆ ಹೆಚ್ಚು ವಿವರಗಳು ತಿಳಿದಿರದೇ ಇದ್ದರೂ, ನೀವು ನಿಮ್ಮ ಸೂರ್ಯನ ಚಿಹ್ನೆಯ ಬಗ್ಗೆ ತಿಳಿದಿರುತ್ತೀರಿ ಮತ್ತು ಮೂಲ ವ್ಯಕ್ತಿತ್ವದ ಚಹರೆಗಳ ಬಗ್ಗೆ ತಿಳಿದಿರುತ್ತದೆ; ಈ ಚಹರೆಗಳನ್ನು ನಿರ್ದಿಷ್ಟ ಚಿಹ್ನೆಗೆ ನಿಯೋಜಿಸಲಾಗಿರುತ್ತದೆ. ವೇದಿಕ್ ಜ್ಯೋತಿಷ್ಯವು ಹೇಳುವ ಪ್ರಕಾರ ಒಟ್ಟು 12 ವಿಭಾಗಗಳಿವೆ ಮತ್ತು ಪ್ರತಿಯೊಂದು ಒಂದು ರಾಶಿ ಚಕ್ರದ ಚಿಹ್ನೆಯನ್ನು ಪ್ರತಿನಿಧಿಸುತ್ತದೆ.
ಯಾವುದೇ 12 ವಿಭಾಗಗಳಲ್ಲಿ ನಿಮ್ಮ ಜನ್ಮ ಸಮಯದಲ್ಲಿ ಸೂರ್ಯನದ ಸ್ಥಾನವನ್ನು ಸೂರ್ಯನ ಚಿಹ್ನೆಯು ಅವಲಂಭಿಸಿದೆ. ಸಾಮಾನ್ಯವಾಗಿ ಸೂರ್ಯನು ಒಂದು ವಿಭಾಗದಲ್ಲಿ 30 ದಿನಗಳವರೆಗೆ ಇರುತ್ತಾನೆ. ಅಂದರೆ, ಪ್ರತೀ ವಿಭಾಗವನ್ನು ಭೇಟಿ ನೀಡಲು ಮತ್ತು ರಾಶಿ ಚಕ್ರವನ್ನು ಪೂರ್ಣಗೊಳಿಸಲು ಇಡೀ ವರ್ಷ ಬೇಕಾಗುತ್ತದೆ. ಪ್ರತೀ ವಿಭಾಗವು ಆ ಚಿಹ್ನೆಯಲ್ಲಿ ಹುಟ್ಟಿದ ಜನರಿಗೆ ನಿರ್ದಿಷ್ಟ ಚಹರೆಯನ್ನು ಮತ್ತು ಶಕ್ತಿಯನ್ನು ಒದಗಿಸುತ್ತದೆ.
ಆರೋಹಣ ಚಿಹ್ನೆ:
ಕನ್ನಡದಲ್ಲಿ ಜ್ಯೋತಿಷ್ಯವನ್ನು ನೀವು ನೋಡಿದಾಗ, ಸೂರ್ಯನ ಚಿಹ್ನೆಯ ಹೊರತಾಗಿ ನೀವು ಆರೋಹಣ ಚಿಹ್ನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ, ಅದು ನೀವು ಹುಟ್ಟಿದ ಸಮಯದಲ್ಲಿ ಯಾವ ರಾಶಿ ಚಕ್ರವು ಪೂರ್ವದ ದಿಗಂತದಲ್ಲಿ ಆರೋಹಣವಾಗಿತ್ತು ಎನ್ನುವುದನ್ನು ವಿವರಿಸುತ್ತದೆ. ಸಾಮಾನ್ಯವಾಗಿ, ನಿಮ್ಮ ಜನ್ಮದ ಸಮಯ ತಿಳಿಸದೆ ಇದ್ದಲ್ಲಿ, ಜ್ಯೋತಿಷಿಗಳು ಬೆಳಗಿನ ಜಾವ 6 ಗಂಟೆಯನ್ನು ಜನ್ಮ ಸಮಯವೆಂದು ಪರಿಗಣಿಸುತ್ತಾರೆ. ಸೂರ್ಯನು ನಿಮ್ಮ ವ್ಯಕ್ತಿಗತ ಪ್ರತ್ಯೇಕತೆಯನ್ನು ವಿವರಿಸುತ್ತದೆ. ಆರೋಹಣ ಚಿಹ್ನೆಯು ನಿಮ್ಮ ವ್ಯಕ್ತಿತ್ವವನ್ನು ಉತ್ತಮವಾಗಿ ಅರಿತುಕೊಳ್ಳಲು ನೆರವಾಗುತ್ತದೆ. ಅದು ನಿಮ್ಮ ದೈಹಿಕ ನೋಟ ಮತ್ತು ನಿಮ್ಮನ್ನು ನೀವು ಇತರರ ಮುಂದೆ ಹೇಗೆ ಇಡುತ್ತೀರಿ ಎನ್ನುವುದರ ಮೇಲೂ ಪರಿಣಾಮ ಬೀರುತ್ತದೆ. ವಿಭಿನ್ನ ಆರೋಹಣ ಚಿಹ್ನೆಗಳು ಈ ಕೆಳಗಿನಂತಹ ವಿವಿಧ ಚಹರೆಗಳನ್ನು ಹೊಂದಿವೆ:
ಅಗ್ನಿ ಚಿಹ್ನೆಗಳಾದ ಮೇಷ, ಸಿಂಹ ಮತ್ತು ಧನು ರಾಶಿಗಳು: ಈ ವ್ಯಕ್ತಿತ್ವಗಳು ಚುರುಕಾದ, ಆಶಾವಾದಿ ಮತ್ತು ಉತ್ಸಾಹಿಗಳಾಗಿರುತ್ತಾರೆ.
ಭೂಮಿ ಚಿಹ್ನೆಗಳಾದ ವೃಷಭ, ಕನ್ಯಾ ಮತ್ತು ಮಕರ ರಾಶಿಗಳು ವಾಸ್ತವಿಕ, ಜಾಗರೂಕ ಮತ್ತು ಗಂಭೀರ ವ್ಯಕ್ತಿಗಳಾಗಿರುತ್ತಾರೆ.
ಗಾಳಿ ಚಿಹ್ನೆಗಳಾದ ಕುಂಭ, ತುಲಾ ಮತ್ತು ಮಿಥುನ ರಾಶಿಗಳು ಸ್ನೇಹಮಯ, ಸಾಮಾಜಿಕ ಒಡನಾಟದ ಮತ್ತು ಸಂವಹನಮುಖಿಗಳಾಗಿರುತ್ತಾರೆ.
ನೀರಿನ ಚಿಹ್ನೆಗಳಾಗಿರುವ ವೃಶ್ಚಿಕ, ಮೀನ ಮತ್ತು ಕಟಕ ರಾಶಿಯವರು ಸೂಕ್ಷ್ಮ ಪ್ರಜ್ಞೆ, ಭಾವನಾತ್ಮಕ ಮತ್ತು ಸಾಕಷ್ಟು ಸಂವೇದನಾಶೀಲರಾಗಿರುತ್ತಾರೆ.
ಮನೆಗಳು:
ಕನ್ನಡದ ಜಾತಕದ ಕಡೆಗೆ ನೀವು ಗಮನಿಸಿದಲ್ಲಿ, ನೀವು ಅದರಲ್ಲಿ 12 ವಿಭಿನ್ನ ಮನೆಗಳಿರುವುದನ್ನು ಕಾಣುವಿರಿ. ಪ್ರತೀ ಮನೆಯು ನಿಮ್ಮ ಜೀವನದ ವಿಭಿನ್ನ ಜಾಗವನ್ನು ಪ್ರತಿನಿಧಿಸುತ್ತದೆ. ಗ್ರಹಗಳು ಮತ್ತು ರಾಶಿ ಚಿಹ್ನೆಗಳು ಪ್ರತೀ ಮನೆಯಲ್ಲೂ ಕಾರ್ಯನಿರ್ವಹಿಸುತ್ತವೆ. ಸೂರ್ಯನ ಚಲನೆಗಳು ರಾಶಿ ಚಿಹ್ನೆಗಳನ್ನು ನಿರ್ದೇಶಿಸುತ್ತವೆ ಮತ್ತು ಮನೆಗಳು ತನ್ನ ಅಕ್ಷದಲ್ಲಿ ಭೂಮಿಯ ಚಲನೆಯನ್ನು ಪ್ರತಿನಿಧಿಸುತ್ತವೆ. ನಿಮ್ಮ ಕನ್ನಡ ಕುಂಡಲಿ ಪ್ರತೀ ಮನೆಯ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳಲು ನಿಮಗೆ ನೆರವಾಗಲಿದೆ ಮತ್ತು ಜ್ಯೋತಿಷಿಗಳಿಗೆ ನಿಮ್ಮ ವ್ಯಕ್ತಿತ್ವದ ಚಹರೆಗಳನ್ನೂ ಚೆನ್ನಾಗಿ ತಿಳಿದುಕೊಳ್ಳಲು ಅವಕಾಶ ಕೊಡುತ್ತದೆ.
1ನೇ ಮನೆ – ಸ್ವಯಂ ಮನೆ
2ನೇ ಮನೆ – ಹಣಕಾಸುಗಳು ಮತ್ತು ಭಾವನೆಗಳ ಮನೆ
3ನೇ ಮನೆ – ಸಂವಹನ, ಮಾನಸಿಕ ಪ್ರಚೋದನೆ ಮತ್ತು ಸಂಬಂಧಗಳ ಮನೆ
4ನೇ ಮನೆ – ವಸತಿ ಮತ್ತು ಆರಂಭಿಕ ಬಾಲ್ಯದ ಮನೆ
5ನೇ ಮನೆ – ಪ್ರೀತಿ, ಸಂತೋಷ, ಸೃಜನಶೀಲತೆಯನ್ನು ಆಳುತ್ತದೆ
6ನೇ ಮನೆ – ಆದೇಶ, ವ್ಯವಸ್ಥೆ ಮತ್ತು ನಿಮ್ಮ ಆರೋಗ್ಯ ಮತ್ತು ನೈರ್ಮಲ್ಯದ ಮನೆ
7ನೇ ಮನೆ – ಸಹಭಾಗಿತ್ವಗಳನ್ನು ಆಳುತ್ತದೆ (ಮದುವೆ, ಉದ್ಯಮ ಇತ್ಯಾದಿ)
8ನೇ ಮನೆ – ಮನೆ, ಆಸ್ತಿ ಮತ್ತು ಬಲಿಷ್ಠ ಭಾವನೆಗಳ ಮನೆ
9ನೇ ಮನೆ – ನಿಮ್ಮ ಶಿಕ್ಷಣ, ಭವಿಷ್ಯ ಜ್ಞಾನ ಮತ್ತು ತತ್ವಜ್ಞಾನವನ್ನು ಆಳುತ್ತದೆ.
10ನೇ ಮನೆ – ನಿಮ್ಮ ಘನತೆ, ಪ್ರಾಮುಖ್ಯತೆ ಮತ್ತು ಜೀವನದ ಆಶೋತ್ತರಗಳನ್ನು ಪ್ರತಿನಿಧಿಸುತ್ತದೆ.
11ನೇ ಮನೆ – ಇದು ಆಶಯಗಳು ಮತ್ತು ಬಯಕೆಗಳ ಮನೆ
12ನೇ ಮನೆ – ಆರೋಗ್ಯ ಸಮಸ್ಯೆಗಳ ಜೊತೆಗೆ ವ್ಯಕ್ತಿಯ ಸುಪ್ತಾವಸ್ಥೆ ಮತ್ತು ಅತೀಂದ್ರಿಯ ಸಾಮರ್ಥ್ಯಗಳಿಗೆ ಸಂಬಂಧಿಸಿದೆ.